CARE : School of Economics
"CARE ಸ್ಕೂಲ್ ಆಫ್ ಎಕನಾಮಿಕ್ಸ್ " ಸರಳವಾಗಿ ಅರ್ಥಶಾಸ್ತ್ರ ವನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶ ದಿಂದ ಪ್ರಾರಂಭಿಸಲಾಗಿದೆ . ಕನ್ನಡ ಮಾತನಾಡುವ ಜನರು ತಮ್ಮ ದೈನಂದಿನ ವ್ಯವಹಾರಗಳನ್ನು ತಮಗರಿವಿಲ್ಲದಂತೆಯೇ ಆರ್ಥಿಕ ತಜ್ಞರಂತೆ ನಿರ್ವಹಿಸುವರು. ಅರಿವಿರದ ಅರ್ಥಶಾಸ್ತ್ರ ವನ್ನು ಅರ್ಥವತ್ತಾಗಿ ಅರ್ಥೈಸುವ ಪ್ರಯತ್ನವಿದು ......
ಮಾರುಕಟ್ಟೆ
ಅರ್ಥಶಾಸ್ತ್ರಜ್ಞರಲ್ಲದವರೂ ಸಹ ಸರ್ವವ್ಯಾಪಿಯಾದ ಪೊರೈಕೆ ಹಾಗು ಬೇಡಿಕೆ ಯಿಂದ ನುಣುಚಿಕೊಳ್ಳಲಾಗುವುದಿಲ್ಲ ..ನೀವು ಬೆಂಗಳೂರಿನಲ್ಲಿ ಒಂದು ಮನೆಯನ್ನು ಕೊಂಡುಕೊಳ್ಳಬೇಕೆಂದಿದ್ದರೆ ಕನಿಷ್ಠ ಪಕ್ಷ ಸುಮಾರು ೩೦ ರಿಂದ ೪೦ ಲಕ್ಷ ವನ್ನಾದರೂ ವ್ಯಹಿಸಬೇಕಾಗುತ್ತದೆಯಲ್ಲವೇ ?. ಈಗೇಕೆ ಹಾಗುವುದೆಂದು ಕೇಳಿದರೆ ಅದು ಪೊರೈಕೆ ಹಾಗು ಬೇಡಿಕೆ ಕ್ರಿಯೆಯ ಪರಿಣಾಮ ವೇ ಅಲ್ಲವೇ ....
ಬೇಡಿಕೆ(Demand)ಎನ್ನುವುದು ಜನರು ಒಂದು ಸರಕನ್ನು ಎಷ್ಟು ಬೆಲೆಗೆ ಕೊಂಡು ಕೊಳ್ಳುವರು ಎನ್ನುವುದನ್ನು ಸೂಚಿಸುತ್ತದೆ .ಯಾವಾಗ ಬೆಲೆ ಹೆಚ್ಚಾಗುತ್ತದೋ ಹಾಗೇ ಬೇಡಿಕೆಯೂ ಕಡಿಮೆಯಾಗುತ್ತದೆ .
ಪೂರೈಕೆ(Supply) ಯು ವ್ಯವಹಾರ ಸಂಸ್ಥೆಯು (Firm) ಮಾರುಕಟ್ಟೆಯಲ್ಲಿ ಒಪ್ಪಿದಬೆಲೆಗೆ ಎಷ್ಟು ಪ್ರಮಾಣದ (Quantity)ಸರಕುಗಳನ್ನು(goods) ಮಾರಾಟಕ್ಕಿಡಲು ಇಚ್ಚಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಯಾವಾಗ ಬೆಲೆಯು ಏರಿಕೆ ಯಾಗುತ್ತದೆಯೊ ಹಾಗೇ ವ್ಯವಹಾರ ಸಂಸ್ಥೆಯು (ವಿಶೇಷವಾಗಿ) ಹೆಚ್ಚಿನ ಲಾಭ ಪಡೆಯುತ್ತದಾದ್ದರಿಂದ ಹೆಚ್ಚು ಹೆಚ್ಚು ಸರಕುಗಳನ್ನು ಮಾರಾಟ ಮಾಡಲು ಉತ್ಸಕವಾಗಿರುತ್ತದೆ.
ಬೆಂಗಳೂರಿನಲ್ಲಿ ಮನೆ ಕೊಂಡುಕೊಳ್ಳುವುದು ಸಂಪಿಗೆ ಹಳ್ಳಿಗಿಂತಲೂ ದುಬಾರಿ ಏಕೆ ?
ಬೆಂಗಳೂರು ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾದ್ದರಿಂದ ಸಹಜವಾಗಿಯೇ ವಾಸಕ್ಕಾಗಿ ಮನೆಗಳ ಬೇಡಿಕೆ ಹೆಚ್ಚಾಗಿರುತ್ತದೆ ಇದಕ್ಕೆ ಮನೆ ನಿರ್ಮಿಸಲು ಹಳ್ಳಿಗಿಂತಲೂ ಕಡಿಮೆ ಸ್ಥಳಾವಕಾಶ ,ಬೆಂಗಳೂರಿಗರು ಹೆಚ್ಚು ಹೆಚ್ಚು ಸಂಭಾವನೆ ಪಡೆಯುವುದರಿಂದ ಬೆಲೆ ಹೆಚ್ಚಾದರೂ ಸಹ ವಸತಿ ಪಡೆಯಲು ಇಚ್ಚಿಸುವುದು ಸರ್ವೇ ಸಾಮಾನ್ಯ . ತತ್ಪರಿಣಾಮವಾಗಿ ಮನೆಗಳಿಗೆ ಬೇಡಿಕೆಯು ಹೆಚ್ಚಾಗಿ ಅದರ ಬೆಲೆಯೂ ದುಬಾರಿ ಯಾಗುತ್ತದೆ.
ನೀವು ಹೆಚ್ಚು ಬೆಲೆ ಕೊಡಲು ಶಕ್ತರಾಗಿದ್ದೀರಿ ಎಂದಾದರೆ ಹೆಚ್ಚು ಬೆಲೆ ತೆರಬೇಕಾಗುತ್ತದೆ .
೧೮೦೦ ರಲ್ಲಿ ಫ್ರೆಂಚ್ ನ ಸಾಮ್ರಾಟ ನೆಪೋಲಿಯನ್ ಒಂದು ಹೋಟೆಲ್ ನ್ನು ಸಂಪರ್ಕಿಸಿ ನಂತರ ಮೊಟ್ಟೆಯಬೆಲೆ ಕೇಳಿ ಗಾಬರಿಗೊಂಡು ಕೇಳುತ್ತಾನೆ "ಇದೇನು ಮೊಟ್ಟೆಯ ಬೆಲೆ ಅಷ್ಟು ಬೆಲೆ ಕಟ್ಟುವಷ್ಟು ದುಬಾರಿಯಾಗಿದೆ , ಮೊಟ್ಟೆಯು ಇಲ್ಲಿ ವಿರಳವಾಗಿ ದೊರೆಯುತ್ತದೆಯೇ ? ಎಂದು.
ನೆಪೋಲಿಯನ್ ನ ಈ ಪ್ರಶ್ನೆಗೆ ಉತ್ತರಿಸುತ್ತಾ ಹೋಟೆಲ್ ಮಾಲೀಕ " ವಿರಳವಾಗಿರುವುದು ಮೊಟ್ಟೆಯಲ್ಲ ,ಅದು ಸಾಮ್ರಾಟರು "ಎಂದನಂತೆ.
Comments
Post a Comment